ICC Test Ranking 2024; ಟೆಸ್ಟ್ ರಾಂಕಿಂಗ್ ಬಿಡುಗಡೆ, ಟಾಪ್ 10ರಲ್ಲಿ ಆರು ಭಾರತೀಯ ಕ್ರಿಕೆಟ್ ಆಟಗಾರರಿಗೆ ಸ್ಥಾನ

By Aishwarya

Published On:

Follow Us

ICC Test Ranking 2024: ಐಸಿಸಿ ಟೆಸ್ಟ್ ನೂತನ Ranking ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಟೀಮ್ ಇಂಡಿಯಾದ ಆರು ಆಟಗಾರರು ಟಾಪ್-10 ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದರಲ್ಲಿ ಬೋಲಿಂಗ್ ಶೇಯಾಂಕದಲ್ಲಿ ಮೂರು, ಬ್ಯಾಟಿಂಗ್ ಭಾಗದಲ್ಲಿ ಮೂರು ಸ್ಥಾನ ಪಡೆದುಕೊಂಡಿದ್ದಾರೆ. ಇದು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ವಿಷಯವಾಗಿದೆ.

ಟೆಸ್ಟ್​ನ ನಂಬರ್ 1 ಬೌಲರ್​ ಆಗಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೊರಹೊಮ್ಮಿದ್ದಾರೆ, ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಕೂಡ ಒಬ್ಬರು ಎಂಬುದು ಮತ್ತೊಂದು ವಿಶೇಷ. ಹೊಸ ರ‍್ಯಾಂಕಿಂಗ್ ಪಟ್ಟಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಯಶಸ್ವಿಯಾಗಿದ್ದಾರೆ. ಹಾಗೆಯೇ ಫ್ಯಾಬ್-4 ಫೋರ್ ಖ್ಯಾತಿಯ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಹಾಗೂ ಜೋ ರೂಟ್ ಕೂಡ ಅಗ್ರ ಹತ್ತರಲ್ಲಿದ್ದಾರೆ. ಇನ್ನೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರೆ, ಅದರಂತೆ ಟೆಸ್ಟ್ ಬ್ಯಾಟರ್​ಗಳ ನೂತನ ರ‍್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ..

ಟೆಸ್ಟ್ ಬ್ಯಾಟರ್​ಗಳ ಟಾಪ್-10​ ರ‍್ಯಾಂಕಿಂಗ್

  • ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)- 859 ರೇಟಿಂಗ್
  • ಜೋ ರೂಟ್ (ಇಂಗ್ಲೆಂಡ್)- 840 ರೇಟಿಂಗ್
  • ಬಾಬರ್ ಆಝಂ (ಪಾಕಿಸ್ತಾನ್)- 768 ರೇಟಿಂಗ್
  • ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)- 768 ರೇಟಿಂಗ್
  • ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 757 ರೇಟಿಂಗ್
  • ರೋಹಿತ್ ಶರ್ಮಾ (ಭಾರತ)- 751 ರೇಟಿಂಗ್
  • ಹ್ಯಾರಿ ಬ್ರೂಕ್ (ಇಂಗ್ಲೆಂಡ್)- 747 ರೇಟಿಂಗ್
  • ಯಶಸ್ವಿ ಜೈಸ್ವಾಲ್ (ಭಾರತ)- 740 ರೇಟಿಂಗ್
  • ದಿಮುತ್ ಕರುಣರತ್ನೆ (ಶ್ರೀಲಂಕಾ)- 739 ರೇಟಿಂಗ್
  • ವಿರಾಟ್ ಕೊಹ್ಲಿ (ಭಾರತ)- 737 ರೇಟಿಂಗ್

ಟೆಸ್ಟ್ ಬೌಲರ್​ಗಳ ಟಾಪ್-10​ ರ‍್ಯಾಂಕಿಂಗ್

  • ಆರ್​. ಅಶ್ವಿನ್ (ಭಾರತ)- 870 ರೇಟಿಂಗ್
  • ಜೋಶ್ ಹ್ಯಾಝಲ್​ವುಡ್ (ಆಸ್ಟ್ರೇಲಿಯಾ)- 847 ರೇಟಿಂಗ್
  • ಜಸ್​ಪ್ರೀತ್ ಬುಮ್ರಾ (ಭಾರತ)- 847 ರೇಟಿಂಗ್
  • ಕಗಿಸೊ ರಬಾಡ (ಸೌತ್ ಆಫ್ರಿಕಾ)- 834 ರೇಟಿಂಗ್
  • ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)- 820 ರೇಟಿಂಗ್
  • ನಾಥನ್ ಲಿಯಾನ್ (ಆಸ್ಟ್ರೇಲಿಯಾ)- 801 ರೇಟಿಂಗ್
  • ರವೀಂದ್ರ ಜಡೇಜಾ (ಭಾರತ)- 788 ರೇಟಿಂಗ್
  • ಜೇಮ್ಸ್ ಅ್ಯಂಡರ್ಸನ್ (ಇಂಗ್ಲೆಂಡ್)- 746 ರೇಟಿಂಗ್
  • ಶಾಹಿನ್ ಅಫ್ರಿದಿ (ಪಾಕಿಸ್ತಾನ್)- 733 ರೇಟಿಂಗ್
  • ಕೈಲ್ ಜೇಮಿಸನ್ (ನ್ಯೂಝಿಲೆಂಡ್)- 729 ರೇಟಿಂಗ್
About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow