IND vs PAK WCL 2024 Final: ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ 2024 ರ ಫೈನಲ್ ಮ್ಯಾಚ್ ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸಿ ಗೆಲುವು ದಾಖಲಿಸುವ ಮೂಲಕ ವರ್ಡ್ ಚಾಂಪಿಯನ್ಶಿಪ್ ಪಟ್ಟಕ್ಕೆ ಏರಿದೆ. ವಿಶ್ವದ ಎಲ್ಲಾ ಮಾಜಿ ನಿವೃತ್ತ ಕ್ರಿಕೆಟ್ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು, ಅದರಂತೆ ಭಾರತ ತಂಡದ ನಿವೃತ್ತ ಕ್ರಿಕೆಟ್ ಆಟಗಾರರು ಈ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದೆ. ಈ ಪಂದ್ಯದಲ್ಲಿ ಯುವರಾಜ್ ಸಿಂಗ್, ಅಂಬಾಟಿ ರಾಯುಡು, ಸುರೇಶ್ ರೈನಾ ಸೇರಿದಂತೆ ಹಲವರು ಪಾಕಿಸ್ತಾನ ತಂಡದ ವಿರುದ್ಧ ಮೈದಾನದಲ್ಲಿ ಅಬ್ಬರಿಸಿದರು.
ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನವು ನಿಗದಿತ 20 ಓವರ್ ಗಳಲ್ಲಿ 156 ರನ್ ಗಳ ಟಾರ್ಗೆಟನ್ನು ಭಾರತ ಲೆಜೆಂಡ್ಸ್ ತಂಡಕ್ಕೆ ನೀಡಿತು. ಈ ವೇಳೆ ಭಾರತದ ಬೌಲಿಂಗ್ ದಾಳಿಗೆ ಪಾಕಿಸ್ತಾನ ತಂಡವು ಹೆಚ್ಚು ರನ್ ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.
156 ರನ್ ಗಳ ಗುರಿಯನ್ನು ಬೆನ್ನಟ್ಟಿದ ಯುವರಾಜ್ ಸಿಂಗ್ ನಾಯಕತ್ವದ ಟೀಮ್ ಇಂಡಿಯಾ 19.1 ಓವರ್ ಗಳಲ್ಲಿ ಪಂದ್ಯವನ್ನು ಮುಗಿಸಿತು. ಇಂಡಿಯಾ ಚಾಂಪಿಯನ್ಸ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಕೇವಲ 10 ರನ್ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಮೂರನೇ ಕ್ರಮಾಂಕದ ಬ್ಯಾಟರ್ ಸುರೇಶ್ ರೈನಾ (4) ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಸಮಯದಲ್ಲಿ ರಾಯುಡುಗೆ ಜೊತೆಯಾದ ಗುರುಕೀತರ್ ಸಿಂಗ್ ಮಾನ್ 33 ಎಸೆತಗಳಲ್ಲಿ (34) ಗಳಿಸಿ 60ರನ್ ಗಳ ಜೊತೆ ಆಟ ಆಡಿದರು.
ರಾಯುಡು 30 ಎಸೆತಗಳಲ್ಲಿ (50) ರನ್ ವಿಜಯದ ಹಾದಿ ಹಿಡಿದರು. ಕೊನೆಯಲ್ಲಿ ಯೂಸುಫ್ ಪಠಾಣ್ 16 ಎಸೆತಗಳಲ್ಲಿ (30) ರನ್ ಸಿಡಿಸಿದರು. ನಾಯಕ ಯುವರಾಜ್ ಸಿಂಗ್ (15) ಮುತ್ತು ಇರ್ಫಾನ್ ಪಠಾಣ್ (5) ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ಪಾಕಿಸ್ತಾನದ ಪರ ಬ್ಯಾಟಿಂಗ್ ಮಾಡಿದ ಶೋಯಬ್ ಮಲಿಕ್ 36 ಎಸತೆಗಳಲ್ಲಿ (41)ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಭಾರತದ ಬೆಂಕಿ ಬೌಲಿಂಗ್ ಎದುರಾಳಿಯನ್ನು ಸಾಧಾರಣ ಮೊತ್ತಕ್ಕೆ ಕಟ್ಟುಹಾಕಿದರು.
ಭಾರತದ ಪರ ಬೌಲಿಂಗ್ ಮಾಡಿದ ಅನುರೀತ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು, ಉಳಿದಂತೆ ವಿನಯ್ ಕುಮಾರ್, ಪವನ್ ನೇಗಿ, ಇರ್ಫಾನ್ ಪಠಾಣ್ ತಲಾ ಒಂದು ವಿಕೆಟ್ ಪಡೆದುಕೊಂಡರು.