India vs Zimbabwe: ಜಿಂಬಾಬ್ವೆ ವಿರುದ್ಧ ಇಂದು ನಡೆದ ಎರಡನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಂಗ್ ಇಂಡಿಯಾ, ಆತಿಥೇಯ ತಂಡವನ್ನು 100 ರನ್‌ಗಳಿಂದ ಮಣಿಸಿದೆ ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಯುವ ಭಾರತ ತಂಡವು ಅತಿಥೇಯ ಜಿಂಬಾಬ್ವೆಯಿಂದ ಅನಿರೀಕ್ಷಿತ ಸೋಲು ಅನುಭವಿಸಿತು. ಆದರೆ ಎರಡನೇ ಪಂದ್ಯದಲ್ಲಿ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 234 ರನ್ ಗಳಿಸಿತು. ಅದಕ್ಕುತ್ತರವಾಗಿ ಜಿಂಬಾಬ್ಬೆ 18.4 ಓವರ್‌ಗಳಲ್ಲಿ 134 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ನಾಯಕ ಶುಭಮನ್ ಗಿಲ್ (2 ರನ್) ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ಆದರೆ ಉಳಿದ ಮೂವರು ಬ್ಯಾಟರ್‌ಗಳು ಉತ್ತಮ ರನ್ ಗಳಿಸುವಲ್ಲಿ ತಂಡಕ್ಕೆ ದೊಡ್ಡ ಮೊತ್ತದ ಟಾರ್ಗೆಟ್ ನೀಡಿದರು. ಅಭಿಷೇಕ್ ಶರ್ಮಾ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದರು 47 ಎಸೆತಗಳಲ್ಲಿ (100) ರನ್ ಗಳಿಸಿ, ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ದಾಖಲಿಸಿದರು. ಈ ಸಿಡಿಲಬ್ಬರದ ಬ್ಯಾಟಿಂಗ್‌ನಲ್ಲಿ ಅವರು 7 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಸಹ ಬಾರಿಸಿದರು. ರುತುರಾಜ್ ಗಾಯಕ್ವಾಡ್ 47 ಎಸೆತಗಳಲ್ಲಿ (77) ರನ್, ರಿಂಕು ಸಿಂಗ್ 22 ಎಸೆತಗಳಲ್ಲಿ (48) ರನ್ ಗಳಿಸುವ ಮೂಲಕ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಗುರಿ ಬೆನ್ನಟ್ಟಿದ ಆತಿಥೇಯ ಜಿಂಬಾಂಬೆ ತಂಡವು 18.4 ಓವರ್‌ಗಳಲ್ಲಿ 134 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಈ ಪಂದ್ಯದಲ್ಲಿ ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್ ಭಾರತದ ಪರ ಗರಿಷ್ಠ ತಲಾ 3 ವಿಕೆಟ್ ಪಡೆದರು. ಮತ್ತೊಮ್ಮೆ ರನ್ಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಿದ ರವಿ ಬಿಷ್ಣೋಯ್ 4 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ 2 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ ಕೂಡ 1 ವಿಕೆಟ್ ಪಡೆದುಕೊಂಡರು, ಮೂಲಕ ಟೀಂ ಇಂಡಿಯಾ ಈ ಪಂದ್ಯವನ್ನು 100 ರನ್‌ಗಳಿಂದ ಗೆದ್ದುಕೊಂಡಿತು.