India vs zimbambve: ಜಿಂಬಾಂಬೆ ವಿರುದ್ಧ ಟಿ-20 ಸರಣಿ ಪಂದ್ಯಾವಳಿಯಲ್ಲಿ ನಾಲ್ಕನೇ ಪಂದ್ಯವನ್ನು ಅದ್ಭುತ ಪ್ರದರ್ಶನದ ಮೂಲಕ ಟಿ-20 ಸರಣಿಯಲ್ಲಿ
ಯಂಗ್ ಇಂಡಿಯಾ ತನ್ನದಾಗಿಸಿಕೊಂಡಿದೆ. ನಿನ್ನೆ ನಡೆದ ಪಂದ್ಯದಲ್ಲಿ ಹತ್ತು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿ ಸತತ ಮೂರನೇ ಗೆಲುವು ದಾಖಲಿಸಿದೆ. ಈ ಸರಣಿಯಲ್ಲಿ ಈಗಾಗಲೇ 4 ಪಂದ್ಯಗಳು ನಡೆದಿದ್ದು ಇದರಲ್ಲಿ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಮೂಲಕ ಜಿಂಬಾಂಬೆ ವಿರುದ್ಧದ ಟಿ20 ಸರಣಿಯನ್ನು….
ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಇಂದು ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಂಗ್ ಇಂಡಿಯಾ, ಆತಿಥೇಯ ತಂಡವನ್ನು 10 ವಿಕೆಟ್ಗಳಿಂದ ಮಣಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 28 ಎಸೆತಗಳನ್ನು ಇನ್ನು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 3-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
153 ರನ್ ಗಳ ಗುರಿ ಪಡೆದ ಭಾರತದ ಪರ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಎದುರಾಳಿ ಬೌಲರ್ ಗಳ ಮೇಲೆ ದಾಳಿ ಮಾಡಿದರು. ನಾಯಕ ಶುಭಮನ್ ಗಿಲ್ ಸಹ ಬ್ಯಾಟಿಂಗ್ ಸಾಥ್ ನೀಡಿದರು. ತಮ್ಮ ಅದ್ಭುತ ಪ್ರದರ್ಶನದ ಮೂಲಕ ಈ ಜೋಡಿ 15.2 ಓವರ್‌ಗಳಲ್ಲಿ 156 ರನ್ ಗಳಿಸಿತು. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ 29 ಎಸೆತಗಳಲ್ಲಿಯೇ ಅರ್ಧ ಶತಕ ಪೂರೈಸಿದರು. ಕೊನೆಗೆ 53 ಎಸೆತಗಳಲ್ಲಿ (93) ರನ್ ಗಳಿಸಿ ಅಜೇಯರಾಗುಳಿದರು. ತಾಳ್ಮೆಯ ಬ್ಯಾಟಿಂಗ್‌ನೊಂದಿಗೆ ಸಾಥ್ ನೀಡಿದ ನಾಯಕ ಶುಭಮನ್ ಗಿಲ್ 39 ಎಸೆತಗಳಲ್ಲಿ (58) ರನ್ ತಂಡದ ಗೆಲುವಿಗೆ ಸಹಕರಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಜಿಂಬಾಬ್ವೆ ಪರ ನಾಯಕ ಸಿಖಂದರ್ ರಝಾ 28 ಎಸೆತಗಳ್ಲಲಿ ಸ್ಫೋಟಕ 46 ರನ್ (3 ಸಿಕ್ಸರ್, 2 ಬೌಂಡರಿ) ಬಾರಿಸಿದರೆ, ಆರಂಭಿಕರಾದ ವೆಸ್ಲಿ ಮಾಧೆವೆರೆ 25 ರನ್, ತಡಿವಾನಾಶೆ ಮರುಮಣಿ 32 ರನ್‌ಗಳ ಕೊಡುಗೆ ನೀಡಿದರು. ಇದರೊಂದಿಗೆ ಜಿಂಬಾಬ್ವೆ 152 ರನ್ ಗಲಿಸಿತು.
ಭಾರತದ ಪರ ಬೋಲಿಂಗ್ ಪ್ರದರ್ಶನ ನೀಡಿದ ಖಲೀಲ್ ಅಹ್ಮದ್ 2, ತುಷಾರ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮ ಮತ್ತು ಶಿವಂ ದುಬೆ ತಲಾ 1 ವಿಕೆಟ್ ಕಬಳಿಸಿದರು.