Vinesh Phogat: ಮಹಿಳೆಯರ 50Kg ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕಾತುರದಿಂದ ಕಾಯುತ್ತಿದ್ದ ಭಾರತೀಯರ ಆಸೆ ನುಚ್ಚುನೂರಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣಕ್ಕಾಗಿ ಅನರ್ಹಗೊಂಡಿದ್ದಾರೆ.
ರಾತ್ರಿಯಿಡೀ ತಂಡವು ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಇಂದು ಬೆಳಗ್ಗೆ 50 ಕೆಜಿಗಿಂತ ಕೆಲವು ಗ್ರಾಂಗಳಷ್ಟು ಅಧಿಕ ತೂಕ ಹೊಂದಿದ್ದರು. ಈ ಸಂದರ್ಭದಲ್ಲಿ ಅವರ ಖಾಸಗಿತನವನ್ನು ಗೌರವಿಸಿ ಅವರ ಜೊತೆ ನಿಲ್ಲುತ್ತದೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ತಿಳಿಸಿದೆ.
ಇಂದು ಡಿಹೈಡ್ರೇಷನ್ ಗೊಂಡು ವಾಂತಿ ಮಾಡಲು ಪ್ರಾರಂಭಿಸಿದರು. ಅವರನ್ನು ಒಲಿಂಪಿಕ್ಸ್ ಗೇಮ್ಸ್ ವಿಲೇಜ್ ವೈದ್ಯಕೀಯ ಕೇಂದ್ರಕ್ಕೆ ರವಾನಿಸಲಾಯಿತು. ಐಒಎ ಅಧಿಕಾರಿಗಳು ಮತ್ತು ಡಬ್ಲ್ಯುಎಫ್‌ಐ ಅಧ್ಯಕ್ಷರೂ ಅವರ ಜೊತೆಗಿದ್ದರು.
ನಿನ್ನೆಯಷ್ಟೆ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದ ನಂ.1 ಆಟಗಾರ್ತಿ ಜಪಾನಿನ ಯುಯಿ ಸುಸಾಕಿಯನ್ನು ಸೋಲಿಸಿ, ಸೆಮಿಫೈನಲ್ ಪ್ರವೇಶಿಸಿದ್ದ ಫೋಗಟ್, ಸೆಮಿಫೈನಲ್‌ನಲ್ಲೂ ಗೆಲುವು ಸಾಧಿಸುವ ಮೂಲಕ ಫೈನಲ್ ತಲುಪಿದ್ದರು.
ಕೂದಲೆಳೆ ಅಂತರದಲ್ಲಿ ಫೈನಲ್ ಪಂದ್ಯ ಆಡುವುದರಿಂದ ವಿನೇಶ್ ಫೋಗಟ್ ಅವಕಾಶ ಕಳೆದುಕೊಂಡಿದ್ದು, ಅವರ ಅನರ್ಹತೆ ಪ್ರಶ್ನಿಸಿ ದೂರು ನೀಡಲು ಭಾರತ ಒಲಿಂಪಿಕ್ಸ್ ಅಸೋಸಿಯೇಷನ್ ನಿರ್ಧರಿಸಿದೆ.