ನಾಯಕ ಶುಭಮನ್ ಗಿಲ್(Shubman Gill) ಮತ್ತು ಋತ್ತುರಾಜ್ ಗಾಯಕ್ವಾಡ್ ಅವರ ಸ್ಫೋಟಕ ಸ್ಪೋಟಕ ಬ್ಯಾಟಿಂಗ್ ಮತ್ತು ವಾಷಿಂಗ್ಟನ್ ಸುಂದರ್ ರವರ ಉತ್ತಮ ಬೋಲಿಂಗ್ ಪ್ರದರ್ಶನಕ್ಕೆ ಜಿಂಬಾಂಬೆ ವಿರುದ್ಧ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿಕೊಂಡಿದೆ.
ಜಿಂಬಾಬ್ವೆ ವಿರುದ್ಧ ಇಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಂಗ್ ಇಂಡಿಯಾ, ಆತಿಥೇಯ ತಂಡವನ್ನು 23 ರನ್ಗಳಿಂದ ಮಣಿಸಿದೆ. ಇದೇ ಮೈದಾನದಲ್ಲಿ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ 100 ರನ್ಗಳಿಂದ ಗೆದ್ದಿದ್ದ ಟೀಂ ಇಂಡಿಯಾ ತನ್ನ ಚಾಂಪಿಯನ್ ಆಟವನ್ನು ಮತ್ತೊಮ್ಮೆ ಪ್ರದರ್ಶಿಸಿ ಸತತ ಎರಡನೇ ಪಂದ್ಯದಲ್ಲಿ ಗೆಲುವು ದಾಖಲಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿಕೊಂಡಿತು. ನಾಯಕ ಶುಭಮನ್ ಗಿಲ್ ಮತ್ತು ಋತ್ತುರಾಜ್ ಗಾಯಕ್ವಾಡ್ ಸ್ಪೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ರನ್ ಗಳಿಸಿಕೊಟ್ಟರು.
ಪಂದ್ಯದ ಆರಂಭದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಜೈಸ್ವಾಲ್ ಹಾಗೂ ನಾಯಕ ಗಿಲ್ ಪವರ್ ಪ್ಲೇ ಹಂತದಲ್ಲಿ ಸ್ಕೋರ್ ಹೆಚ್ಚಿಸಿದರು. ಆದರೆ ಈ ಹಂತದಲ್ಲಿ (36) ರನ್ ಗಳಿಸಿ ಜೈಸ್ವಾಲ್ ತಮ್ಮ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಶರ್ಮಾ (10), ನಂತರ ಮೈದಾನಕ್ಕೆ ಇಳಿದ ಋತುರಾಜ್ ಗಾಯಕ್ವಾಡ್ ನಾಯಕ ಶುಭಮನ್ ಗಿಲ್ ಜೊತೆ ಸೇರಿ ಜಿಂಬಾಂಬೆ ಬೋಲರ್ ಗಳಿಗೆ ಕಾಟಕೊಟ್ಟರು. ನಾಯಕ ಗಿಲ್ 49 ಹೆಸರುಗಳಲ್ಲಿ (66) ರನ್ ಗಳಿಸಿದರು, ಋತುರಾಜ್ ಗಾಯಕ್ವಾಡ್ (49) ಗಳಿಸಿ ತಂಡಕ್ಕೆ ಆಸರೆಯಾದರು.
ಉಳಿದಂತೆ ಸ್ಯಾಮ್ಸನ್ (12), ರಿಂಕು ಸಿಂಗ್ (1) ಗಳಿಸಿದರು.
186 ರನ್ ಗಳ ಬೆನ್ನಟ್ಟಿದ ಜಿಂಬಾಂಬೆ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ಮಾತ್ರ ರನ್ ಗಳಿಸಿ ಶಕ್ತವಾಯಿತು.ಮೆಯಸ್೯ (65) ಕ್ಲೈವ್ (37), ಅಜೇಯ (18), ರಜಾ (15) ಗಳಿಸಿದರು.
ಭಾರತ ಪರ ವಾಷಿಂಗ್ಟನ್ ಸುಂದರ್ 3, ಅವೇಶ್ ಖಾನ್ 2, ಖಲೀಲ್ ಅಹ್ಮದ್ 1 ವಿಕೆಟ್ ಪಡೆದರು. ಈ ಮೂಲಕ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-1 ಅಂತರದೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ.
Shubman Gill: ನಾಯಕ ಶುಭಮನ್ ಗಿಲ್ ಅಬ್ಬರಕ್ಕೆ ಜಿಂಬಾಬ್ವೆ ತತ್ತರ
By Aishwarya
Published On:
For Feedback - feedback@khnewstimes.com