ಮುಂಬೈನಲ್ಲಿ ಮುಗಿಲು ಮುಟ್ಟಿದ ಟೀಮ್ ಇಂಡಿಯಾ ಸಂಭ್ರಮಾಚರಣೆ; 125 ಕೋಟಿ ಚೆಕ್ ನೀಡಿದ ಬಿಸಿಸಿಐ

By Aishwarya

Published On:

Follow Us

ಟಿ20 ವಿಶ್ವಕಪ್ ಗೆದ್ದು ತವರಿಗೆ ಮರಳಿರುವ ಟೀಮ್ ಇಂಡಿಯಾಗೆ ಮುಂಬೈನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಮುಂಬೈನ ಪ್ರಮುಖ ರಸ್ತೆಗಳಲ್ಲಿ ತೆರೆದ ಬಸ್ ನಲ್ಲಿ ‌ ತಂಡದ ಆಟಗಾರರು ರೋಡ್ ಶೋ ನಡೆಸಿ ವಾಂಖೆಡೆ ಸ್ಟೇಡಿಯಂನಲ್ಲಿ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಭಾಗಿಯಾದರು. ಈ ವೇಳೆ ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡಕ್ಕೆ 125 ಕೋಟಿ ರೂ ಬಹುಮಾನವನ್ನು ವಿತರಿಸಿದರು.

ಗುರುವಾರ ಬೆಳಗ್ಗೆ ದೆಹಲಿಯಲ್ಲಿ ಸಂಭ್ರಮಾಚರಣೆ ಮುಗಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ರೋಹಿತ್ ಶರ್ಮಾ ನೇತೃತ್ವದ ತಂಡ ಮುಂಬೈಗೆ ಆಗಮಿಸಿದರು. ಮುಂಬೈನಲ್ಲಿ ಸಂಜೆ 5 ಗಂಟೆಯಿಂದ ಮರೈನ್ ಡ್ರೈವ್‌ನ ಉದ್ದಕ್ಕೂ ತೆರೆದ ಬಸ್ ನಲ್ಲಿ ಭಾರತ ತಂಡದ ವಿಜಯೋತ್ಸವ ಮೆರವಣಿಗೆ ಸಾಗಲಿದ್ದು, ವಾಂಖೆಡೆ ಕ್ರೀಡಾಂಗಣದ ವರೆಗೂ ರೋಡ್ ರೋಡ್ ಶೋ ಸಾಗಿತು‌.

ವಾಂಖೆಡೆ ಕ್ರೀಡಾಂಗಣದಲ್ಲಿ ಆಟಗಾರರಿಗೆ ಬಿಸಿಸಿಐ ಅಭಿನಂದನೆ ಸಲ್ಲಿಸಿತು. ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಮುಂಬೈನ ಗಲ್ಲಿಗಲ್ಲಿಗಳಲ್ಲಿ ಜನ ಸೇರಿಕೊಂಡಿದ್ದರು. ವಾಂಖೆಡೆ ಕ್ರೀಡಾಂಗಣ ಅಕ್ಷರಶಃ ಅಭಿಮಾನಿಗಳಿಂದ ತುಂಬಿ ಕಿಕ್ಕಿರಿದು ತುಂಬಿತ್ತು. ಕ್ರೀಡಾಂಗಣದ ಸುತ್ತಮುತ್ತ ಕೈಕಾಲು ಹಾಕದಷ್ಟು ಮಟ್ಟಿಗೆ ಜನರು ಜಮಾಯಿಸಿದ್ದರು ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆದವು.

ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ” 2007 ಅಥವಾ 2011ರಲ್ಲಿ ನಾವು ವಿಶ್ವಕಪ್ ಗೆದ್ದಾಗ ಹಿರಿಯ ಆಟಗಾರರು ತುಂಬಾ ಅಳುತ್ತಿದ್ದರು. ಆದರೆ ನಾನು ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. ಖುಷಿಯ ಸಂದರ್ಭದಲ್ಲಿ ಅವರೆಲ್ಲಾ ಯಾಕೆ ಇಷ್ಟೊಂದು ಭಾವುಕರಾಗುತ್ತಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದೆ ಎಂದು ಕೊಹ್ಲಿ ಹೇಳಿದರು. ಆದರೆ ಈಗ ನಾವು ಹಿರಿಯರು ಎಂದು ನಾವು ಅನುಭವಿಸಬಹುದು. ನಾನಿರಲಿ ಅಥವಾ ರೋಹಿತ್ ಆಗಿರಲಿ, ಇಬ್ಬರೂ ಬಹುಕಾಲ ಟ್ರೋಫಿ ಗೆಲ್ಲುವುದರಲ್ಲಿ ನಿರತರಾಗಿದ್ದರು. ಮೊದಲು ನನ್ನ ನಾಯಕತ್ವದಲ್ಲಿ ಮತ್ತು ನಂತರ ರೋಹಿತ್ ನಾಯಕತ್ವದಲ್ಲಿ. ನಾವಿಬ್ಬರೂ ಈ ಟ್ರೋಫಿ ಗೆಲ್ಲಲು ಹತಾಶರಾಗಿದ್ದೆವು. ಆದರೆ ಯಾವುದೋ ಕಾರಣದಿಂದ ನಮಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಈಗ ನಾವು ಗೆದ್ದಿರುವುದು ನಮಗೆ ವಿಶೇಷ. ಗೆದ್ದು ಮತ್ತೆ ವಾಂಖೆಡೆಗೆ ಬರುವುದು ನಮ್ಮ ಪಾಲಿಗೆ ವಿಶೇಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದರು.

ನಂತರ ಮಾತನಾಡಿದ ಟೀಮ್ ಇಂಡಿಯ ನಾಯಕ ರೋಹಿತ್ ಶರ್ಮ “ಭಾರತೀಯ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಅವರು ಈ ಟಿ20 ವಿಶ್ವಕಪ್ ಪ್ರಶಸ್ತಿಗಾಗಿ ಆಟಗಾರರಂತೆ ಹಪಹಪಿಸುತ್ತಿದ್ದರು. ಇಂದು ಎಲ್ಲರ ಕನಸು ನನಸಾಗಿದೆ ಎಂದರು.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow