T20 World Cup 2024: ಟಿ-ಟ್ವೆಂಟಿ ವಿಶ್ವಕಪ್ ನ ಭರ್ಜರಿ ಗೆಲುವಿನೊಂದಿಗೆ ವಿಶ್ವಕಪ್ ಹಿಡಿದು ತವರಿಗೆ ನಾಳೆ(ಜುಲೈ 04) ವಾಪಸ್ ಅಗಲಿರುವ ಟೀಮ್ ಇಂಡಿಯಾ ಮೊದಲಿಗೆ ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮುಂಬೈಗೆ ಆಗಮಿಸಿ ಅಲ್ಲಿ ವಿಶ್ವ ಚಾಂಪಿಯನ್ಸ್ ಎಂದೆ ಸಿದ್ದವಾಗಿರುವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಭ್ರಮಾಚರಣೆ ನಡೆಯುವ ಸ್ಥಳ ಯಾವುದು? ಯಾವ ಯಾವ ಆಟಗಾರರು ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿದ್ದಾರೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.
ಬಿಸಿಸಿಐ ವ್ಯವಸ್ಥೆ ಮಾಡಿರುವ ಚಾರ್ಟರ್ ಫ್ಲೈಟ್ ಮೂಲಕ ಗುರುವಾರ ಬಾರ್ಬಡಸ್ ನಿಂದ ವಿಶ್ವ ಕಪ್ ಹಿಡಿದು ದೆಹಲಿಗೆ ಬಂದಿಳಿಯಲಿದೆ. ಈಗಾಗಲೇ ಮುಂಬೈನಲ್ಲಿ ಸಂಭ್ರಮಾಚರಣೆ ಮನೆ ಮಾಡಿದ್ದು, ವಿಜಯೋತ್ಸವದ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿವೆ. ಈ ಹಿನ್ನಲೆ ಭಾರತ ತಂಡ ಗುರುವಾರ ಸಂಜೆ 5 ಗಂಟೆಗೆ ತೆರೆದ ಬಸ್ ನಲ್ಲಿ ಮೆರವಣಿಗೆ ಹೋಗಲಿದೆ. ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ ನಿಂದ ಮೆರವಣಿಗೆ ಮೂಲಕ ತೆರೆದ ಬಸ್ ನಲ್ಲಿ ವಾಕೇ ಡೇ ಸ್ಟೇಡಿಯಂಗೆ ತಲುಪುತ್ತದೆ.
ಈ ಮೆರವಣಿಗೆಯಲ್ಲಿ ವಿಶ್ವಕಪ್ ನೊಂದಿಗೆ ಭಾರತ ತಂಡದ ಎಲ್ಲಾ ಆಟಗಾರರು ತೆರೆದ ಬಸ್ ನಲ್ಲಿ ಮೆರವಣಿಗೆ ಬರಲಿದ್ದು ಒಟ್ಟಾಗಿ ವಿಜಯೋತ್ಸವವನ್ನು ವಾಕೇಡಿ ಕ್ರೀಡಾಂಗಣದಲ್ಲಿ ಆಚರಿಸಲಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ನ ಕಾರ್ಯದರ್ಶಿಯಾದಂತಹ ಜಯ್ ಶಾ ಅವರು ಘೋಷಿಸಿದಂತಹ 125 ಕೋಟಿ ರೂಪಾಯಿ ಬಹುಮಾನವನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಲಿದ್ದಾರೆ.