ಭಾರತೀಯ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ಮಾಡುತ್ತಿರುವಾಗಲೇ ಟಿಕೆಟ್ ಪ್ರೇಮಿಗಳಿಗೆ ಆಘಾತಕಾರ ಸುದ್ದಿ ಎಂಬಂತೆ ಜಿಂಬಾಂಬೆ ವಿರುದ್ಧ(India vs Zimbabwe Match) ಟೀಮ್ ಇಂಡಿಯಾವು 13 ರನ್ ಗಳಿಂದ ಸೋಲನ್ನು ಒಪ್ಪಿಕೊಂಡಿದೆ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಜಿಂಬಾಂಬೆ ವಿರುದ್ಧ 5 ಟಿ20 ಸರಣಿ ಪಂದ್ಯಾವಳಿಯನ್ನು ಆಡುತ್ತಿದೆ.
ಈ ಮೂಲಕ ಬೇಸರಕ್ಕೆ ಒಳಗಾಗಿದೆ. ಬ್ಯಾಟಿಂಗ್ ವೈಫಲ್ಯವೇ ಭಾರತ ತಂಡದ ಸೋಲಿಗೆ ಕಾರಣವಾದರೆ, ಶುಭ್ಮನ್ ಗಿಲ್ ತಮ್ಮ ಮೊದಲ ನಾಯಕತ್ವದಲ್ಲಿಯೇ ಕಳಪೆ ದಾಖಲೆ ಮಾಡಿದರು. ಅನುಭವದ ಕೊರತೆ ಇರುವ ಜಿಂಬಾಬ್ವೆ ತಂಡದ ಎದುರು ಭಾರತ ತಂಡವು ಪರದಾಡಿತು. 13 ರನ್‌ಗಳಿಂದ ಸೋತಿತು. ಆತಿಥೇಯ ತಂಡವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತು. ಭಾರತ ತಂಡವು 2024ರಲ್ಲಿ ಟಿ20 ಮಾದರಿಯಲ್ಲಿ ಸೋತ ಮೊದಲ ಪಂದ್ಯ ಇದಾಗಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಆತಿಥೇಯ ಜಿಂಬಾಬ್ವೆ ಬಳಗ 20 ಓವರ್ಗಳು ಮುಕ್ತಾಯಗೊಳ್ಳುವಾಗ 9 ವಿಕೆಟ್ ನಷ್ಟಕ್ಕೆ 115 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 19.5 ಓವರ್ಗಳಲ್ಲಿ 102 ರನ್ಗಳಿಗೆ ಆಲ್ಔಟ್ ಆಯಿತು.
ಗುರಿಯನ್ನು ಬೆನ್ನಟ್ಟಿದ ಭಾರತದ ಬ್ಯಾಟ್ಗಳು ಸತತವಾಗಿ ವಿಕೆಟ್ ಒಪ್ಪಿಸಿದರು. ಪದಾರ್ಪಣೆ ಅವಕಾಶ ಪಡೆದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದರೆ ರುತುರಾಜ್ ಗಾಯಕ್ವಾಡ್ (7) ರನ್ಗೆ ಸೀಮಿತಗೊಂಡರು. ರಿಯಾನ್ ಪರಾಗ್ (2) ರನ್ಗೆ ವಿಕೆಟ್ ಒಪ್ಪಿಸಿದರು. ರಿಂಕು ಸಿಂಗ್ ಶೂನ್ಯಕ್ಕೆ ಪೆವಿಲಿಯನ್ಗೆ ಮರಳುವ ಮೂಲಕ ಭಾರತದ ಬ್ಯಾಟಿಂಗ್ ಬಲಕ್ಕೆ ಪೆಟ್ಟು ಬಿತ್ತು. 47 ರನ್ಗಳಿಗೆ 7 ವಿಕೆಟ್ ಗಳನ್ನು ನೀಡುವ ಮೂಲಕ ಸೋಲಿನ ಹಾದಿಯನ್ನು ಹಿಡಿದರು. ನಾಯಕ ಗಿಲ್ (31) ರನ್, ವಾಷಿಂಗ್ಟನ್ ಸುಂದರ್ (27) ಹಾಗೂ ಆವೇಶ್ ಖಾನ್ (17) ರನ್ ಬಾರಿಸಿದರು. ಜಿಂಬಾಬ್ವೆ ಪರ ಸಿಕಂದರ್ ರಾಜಾ ಹಾಗೂ ತೆಂಡೈ ಚಟಾರ ತಲಾ 3 ವಿಕೆಟ್ ಉರುಳಿಸಿ ಮಿಂಚಿದರು.