Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತದ ತಾರಾ ಕುಸ್ತಿಪಟು ವಿನೇಶ್ ಪೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ.
ವಿಶ್ವದ ನಂ.1 ಆಟಗಾರ್ತಿ ಜಪಾನ್‌ನ ಜಪಾನಿನ ಯುಯಿ ಸುಸಾಕಿಯನ್ನು ಸೋಲಿಸಿ, ಸೆಮಿಫೈನಲ್ ಪ್ರವೇಶಿಸಿದ್ದ ಫೋಗಟ್, ಸೆಮಿಫೈನಲ್‌ನಲ್ಲೂ ಗೆಲುವು ಸಾಧಿಸುವ ಮೂಲಕ ಫೈನಲ್ ತಲುಪಿದ್ದಾರೆ.
ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಶುಭದಿನವಾಗಿತ್ತು ಒಂದು ಕಡೆ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಫೈನಲ್‌ಗೆ ಅರ್ಹತೆ ಪಡೆದುಕೊಂಡರೆ, ಮತ್ತೊಂದು ಕಡೆ ವಿನೇಶ್ ಫೋಗಟ್ ಕುಸ್ತಿಯಲ್ಲಿ ಮಿಂಚು ಹರಿಸಿದರು.
ವಿನೇಶ್ ಪೋಗಟ್ ಅವರು ಆರಂಭದಿಂದಲೇ ಎದುರಾಳಿಯ ವಿರುದ್ಧ ಬಿಗಿಪಟ್ಟು ಹಾಕಿದರು. ಕ್ಯೂಬಾದ ಕುಸ್ತಿಪಟು ಭಾರತದ ಪೈಲ್ವಾನ್ ಮುಂದೆ ಮಿಸುಕಾಡಲು ಆಗಲಿಲ್ಲ. ಇದರಿಂದ ಸತತ ಅಂಕ ಪಡೆಯುತ್ತಾ ಸಾಗಿದ ವಿನೇಶ್ 5 ಅಂಕ ಪಡೆದು ಏಕಮೇವಾಗಿ ಜಯ ಸಾಧಿಸಿದರು.
ಕಳೆದ ವರ್ಷ ಭಾರತ ಕುಸ್ತಿ ಸಂಸ್ಥೆಯ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರ ವಿರುದ್ಧ ವಿನೇಶ್ ಪೋಗಟ್ ಸೇರಿದಂತೆ ಮಹಿಳಾ ಕುಸ್ತಿಪಟುಗಳು ದೊಡ್ಡ ಮಟ್ಟದಲ್ಲಿ ಧರಣಿ ನಡೆಸಿದ್ದರು. ಈಗ ಒಲಿಂಪಿಕ್‌ನಲ್ಲಿ ಪದಕದ ಮೂಲಕ ಉತ್ತರ ಕೊಟ್ಟಿದ್ದಾರೆ.
ವಿನೇಶ್ ಫೋಗಟ್ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಬೆಳ್ಳಿ ಪದಕ ಖಚಿತವಾಗಿದ್ದು, ಇನ್ನೇನಿದ್ದರೂ ಚಿನ್ನದ ಪದಕ್ಕಾಗಿ ಹೋರಾಡಲಿದ್ದಾರೆ. ಫೈನಲ್‌ನಲ್ಲಿ ಸೋತರೂ ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಖಚಿತವಾಗಿದೆ.