Rohit Sharma: 2025ರ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ವರೆಗೂ ಭಾರತ ಟೆಸ್ಟ್ ಹಾಗೂ ಏಕದಿನ ತಂಡಗಳಿಗೆ ರೋಹಿತ್ ಶರ್ಮ ನಾಯಕರಾಗಿ ಮುಂದುವರೆಯಲಿದ್ದಾರೆ, ಎಂದು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ.
ಟಿ20 ವಿಶ್ವ ಕಪ್ ಗೆದ್ದ ಭಾರತವು ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು. ಇದರ ಬೆನ್ನಲ್ಲೇ ಭಾರತ ಟೆಸ್ಟ್ ಹಾಗೂ ಏಕದಿನ ತಂಡಗಳಲ್ಲಿ ಮುಂದುವರಿಸುವ ಬಗ್ಗೆ ಸಾಕಷ್ಟು ವದಂತಿ ಕ್ರಿಕೆಟ್ ಪ್ರೇಮಿಗಳಲ್ಲಿ ಹರಡಿತ್ತು. ಈ ಕುರಿತು ಕಾರ್ಯದರ್ಶಿ ಜೈ ಶಾ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಜೈ ಶಾ “ಟಿ-20 ವಿಶ್ವಕಪ್ ನಲ್ಲಿ ಆಟಗಾರರ ಪ್ರದರ್ಶನಕ್ಕೆ ಸಂತಸವಾಗಿದೆ. ಮುಂದಿನ ವರ್ಷ ನಡೆಯಲಿರುವ ಎರಡು ಪ್ರತಿಷ್ಠಿತ ಟೂರ್ನಿಯಲ್ಲೂ ಭಾರತ ರೋಹಿತ್ ಶರ್ಮ ಸಾರಥ್ಯದಲ್ಲಿ ಪ್ರಶಸ್ತಿ ಗೆಲ್ಲಲಿದೆ ರೋಹಿತ್ ಶರ್ಮ ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. ಕನಿಷ್ಠ ಮುಂದಿನ ವರ್ಷದ ಪ್ರತಿಷ್ಠಿತ ಟೂರ್ನಿಗಳು ಮುಗಿಯುವವರೆಗೂ ಇರುತ್ತಾರೆ” ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ತಂಡ 2023ರಲ್ಲಿ ಏಕದಿನ ವಿಶ್ವಕಪ್ ನಲ್ಲಿ ಭಾರತ ಸತತ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೂ ಫೈನಲ್ ನಲ್ಲಿ ಸೋತು ಆಘಾತ ಅನುಭವಿಸಿತ್ತು. ಅ ಸಮಯದಲ್ಲಿ ನಾವು ಸೋತಿರಬಹುದು. ಆದರೆ ಜನರ ಹೃದಯ ಗೆದ್ದಿದ್ದವು ಅದರೆ ಈ ಬಾರಿ ಹೃದಯವನ್ನೂ ಗೆದ್ದೆವು, ಪ್ರಶಸ್ತಿಯನ್ನೂ ಗೆದ್ದೆವು ಎಂದು ಜೈ ಶಾ ಸಂತಸ ವ್ಯಕ್ತಪಡಿಸಿದರು.