ಮಹಾರಾಜ ಟ್ರೋಫಿ’ ಟಿ20 ಪಂದ್ಯಾವಳಿ ಕನ್ನಡಿಗರಿಗೆ ಕ್ರಿಕೆಟ್ ರಸದೌತಣ ಬಡಿಸಲು ತಯಾರಾಗಿದೆ. ಇಂದಿನಿಂದ (ಅಗಸ್ಟ್ 15) ಅರಂಭವಾಗಿದ್ದು, ಒಟ್ಟು 17 ದಿನಗಳ ಕಾಲ ನಡೆಯಲಿರುವ ಈ ಪಂದ್ಯವಾಳಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳೆಂದರೆ ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಲಯನ್ಸ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗ ಮಿಸ್ಟಿಕ್ಸ್ ಮತ್ತು ಮೈಸೂರು ವಾರಿಯರ್ಸ್.
Maharaja Trophy KSCA T20 2024
ಈ ಟೂರ್ನಿಯ ಎಲ್ಲ ಪಂದ್ಯಗಳು ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯಲಿವೆ. ಒಟ್ಟು 6 ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ಡಬಲ್-ಹೆಡರ್ ಪಂದ್ಯಗಳಿರುವಾಗ ಮೊದಲ ಪಂದ್ಯವು 3 PM IST ಕ್ಕೆ ಪ್ರಾರಂಭವಾಗುತ್ತದೆ. ಹಾಗೆಯೇ ದ್ವಿತೀಯ ಪಂದ್ಯವು ರಾತ್ರಿ 7 PM IST ಕ್ಕೆ ಶುರುವಾಗಲಿದೆ.
ಮಹಾರಾಜ ಟ್ರೋಫಿ ಟಿ20 ಸೀಸನ್-3 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನ ಸ್ಟಾರ್ ಸ್ಪೋರ್ಟ್ಸ್ 2 (ಇಂಗ್ಲಿಷ್) ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಫ್ಯಾನ್‌ಕೋಡ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
ಬೆಂಗಳೂರು ತಂಡಕ್ಕೆ ಶುಭಾರಂಭ
ಇಂದು ಉದ್ಘಾಟನೆ ಪಂದ್ಯದವು ಬೆಂಗಳೂರು ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ನಡೆದಿದ್ದು, ಬೆಂಗಳೊ ತಂಡವು 9 ವಿಕೆಟ್‌ಗಳಿಂದ ಪ್ರಥಮ ಜಯ ಗಳಿಸಿದೆ.
ಮಧ್ಯಾಹ್ನ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು, ಗುಲ್ಬರ್ಗ ಮಿಸ್ಟಿಕ್ಸ್ ತಂಡವು 16.4 ಓವರ್‌ಗಳಲ್ಲಿ 116 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 11.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಜಯಿಸಿತು.