ಭಾರತದ ಕುಸ್ತಿಪಟು ವಿನೇಶ್ ಫೋಗಾಟ್(Vinesh Phogat) ಅನರ್ಹತೆಯನ್ನು ರದ್ದುಗೊಳಿಸಿ ಬೆಳ್ಳಿ ಪದಕವನ್ನು ನೀಡಬೇಕೆಂಬ ಅವರ ಮನವಿಯನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ.
ಈ ಮೂಲಕ ಬೆಳ್ಳಿ ಪದಕಕ್ಕಾಗಿ ಎದುರು ನೋಡುತ್ತಿದ್ದ ಫೋಗಾಟ್‌ಗೆ ಭಾರಿ ನಿರಾಶೆ ಮೂಡಿಸಿದೆ. ಇದರೊಂದಿಗೆ ಭಾರತದ ಕುಸ್ತಿಪಟುವಿನ ಬೆಳ್ಳಿ ಪದಕದ ಕನಸು ಭಗ್ನವಾಗಿದೆ.
ಒಲಿಂಪಿಕ್ ‘ಬೆಳ್ಳಿ ಪದಕ’ ಕ್ಕೆ ಸಲ್ಲಿಸಿದ್ದ ಮನವಿ ವಜಾ
ಸೆಮಿಫೈನಲ್ವರೆಗೂ ಅದ್ಬುತ ಪ್ರದೇಶ ನೀಡಿ ಫೈನಲ್ಗೆ ಲಗ್ಗೆ ಇಟ್ಟಿದ್ದರು. ಆದರೆ ಕೇವಲ 100 ಗ್ರಾಂ ತೂಕ ಹೆಚ್ಚಿದ ಕಾರಣ ಫೈನಲ್ನಿಂದ ಅನರ್ಹಗೊಳಿಸಲಾಗಿತ್ತು. ಫೈನಲ್ನಲ್ಲಿ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಕೋರ್ಟ್ ಆಫ್ ಆರ್ಬಿಟ್ರೇಶನ್ನಲ್ಲಿ ವಿನೇಶ್ ಫೋಗಟ್ ಅರ್ಜಿ ಸಲ್ಲಿಸಿದ್ದರು. ತನಗೆ ಕನಿಷ್ಠ ಬೆಳ್ಳಿ ಪದಕವನ್ನಾದ್ರೂ ನೀಡುವಂತೆ ಒತ್ತಾಯಿಸಿದ್ದರು.
ಇದಕ್ಕೂ ಮುನ್ನ ವಿನೇಶ್ ಫೋಗಾಟ್ ಅವರ ಮೇಲ್ಮನವಿಯ ಮೇರೆಗೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು (ಸಿಎಎಸ್) ಆಗಸ್ಟ್ 13 ರಂದು ತನ್ನ ತೀರ್ಪನ್ನು ನೀಡಬೇಕಾಗಿತ್ತು. ಆದರೆ, ಇದನ್ನು ಆಗಸ್ಟ್ 16ಕ್ಕೆ ಮುಂದೂಡಲಾಗಿತ್ತು. ಇದೀಗ ವಿನೇಶ್ ಫೋಗಾಟ್ ಅವರ ಅರ್ಜಿಯನ್ನೇ ತಿರಸ್ಕರಿಸಲಾಗಿದೆ ಎಂಬ ಸುದ್ದಿ ಬರುತ್ತಿದೆ.