Shreyanka Patil: ಮಹಿಳಾ ಏಷ್ಯಾ ಕಪ್ ಟೂರ್ನಿಯು ಆರಂಭವಾಗಿದ್ದು ಭಾರತವು ಈಗಾಗಲೇ ಎರಡು ಪಂದ್ಯಗಳಲ್ಲಿ ವಿಜಯ ಸಾಧಿಸಿದೆ. ಗೆಲುವಿನ ಖುಷಿಯಲ್ಲಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಘಾತ ಒಂದು ಎದುರಾಗಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಯುವ ಆಟಗಾರ್ತಿ, ಕನ್ನಡತಿ ಶ್ರೇಯಾಂಕ ಪಾಟೀಲ್ ಬೆರಳಿನ ಮೂಳೆ ಮುರಿತದಿಂದಾಗಿ ಟೂರ್ನಿ ನಿಂದ ಹೊರಗುಳಿಯಲಿದ್ದಾರೆ.
ಶ್ರೇಯಾಂಕಾ ಪಾಟೀಲ್ ಟೂರ್ನಿಯಿಂದ ಹೊರ ಬಿದ್ದ ವಿಚಾರವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಪಾಕಿಸ್ತಾನ ತಂಡದ ವಿರುದ್ಧ ಕ್ಯಾಚ್ ಹಿಡಿಯಲು ಯತ್ನಿಸಿದ ಭಾರತದ ಯುವ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್ ತನ್ನ ಎಡಗೈಯ ನಾಲ್ಕನೇ ಬೆರಳಿನ ಮೂಳೆ ಮುರಿತ ಮಾಡಿಕೊಂಡಿದ್ದಾರೆ.
ಬೆರಳಿಗೆ ಗಾಯವಾದ ನಂತರವೂ, ಶ್ರೇಯಾಂಕಾ ಪಾಟೀಲ್ ಮತ್ತೆ ಬೌಲ್ ಮಾಡಲು ಬಂದಳು ಮತ್ತು ಭಾರತ ತಂಡಕ್ಕೆ 3.2 ಓವರ್‌ಗಳಲ್ಲಿ 14 ರನ್ ನೀಡಿ 2 ವಿಕೆಟ್‌ಗಳ ಕೊಡುಗೆ ನೀಡಿದಳು. ಕೇವಲ 14 ರನ್ ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್ ಕಿತ್ತಿದ್ದರು. ಆ ಮೂಲಕ ಎದುರಾಳಿ ತಂಡವನ್ನು 108 ರನ್‌ಗಳಿಗೆ ಆಲೌಟ್ ಮಾಡಲು ನೆರವಾದರು.
ಶ್ರೇಯಾಂಕ ಪಾಟೀಲ್ ಬದಲಿಗೆ ತಂಡದೊಂದಿಗೆ ನಾಲ್ವರು ಮೀಸಲು ಆಟಗಾರ್ತಿಯರಲ್ಲಿ ಒಬ್ಬರಾಗಿದ್ದ ಎಡಗೈ ಸ್ಪಿನ್ನರ್ ತನುಜಾ ಕನ್ವರ್ ಮುಖ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಡಬ್ಲ್ಯೂಪಿಎಲ್ ನಲ್ಲಿ ಬೆತ್ ಮೋನಿ ಸಾರಥ್ಯದ ಗುಜರಾತ್ ಟೈಟನ್ಸ್ ಪರ ಆಡಿದ್ದ ತನುಜಾ ಕನ್ವರ್ 8 ಪಂದ್ಯಗಳಿಂದ 7.13 ಸರಾಸರಿ ಯಲ್ಲಿ 10 ವಿಕೆಟ್ ಪಡೆದಿದ್ದರು.