ವೆಸ್ಟ್ ಇಂಡಿಸ್ vs ಅಫ್ಘಾನಿಸ್ತಾನ್ ನಡುವಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ವೆಸ್ಟ್ ಇಂಡೀಸ್ ಹಲವು ವಿಶ್ವ ದಾಖಲೆಗಳನ್ನು ಬರೆದಿದೆ.
ಸೇಂಟ್ ಲೂಸಿಯಾದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಅಫ್ಘಾನ್ ತಂಡಕ್ಕೆ 20 ಓವರ್ ನಲ್ಲಿ 218 ಕಲೆ ಹಾಕಿ ದೊಡ್ಡ ಮೊತ್ತದ ಗುರಿಯನ್ನು ನೀಡಿತ್ತು. ಈ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ್ದ ಅಫ್ಘಾನಿಸ್ತಾನ್ ಕೇವಲ 114 ರನ್ ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ವೆಸ್ಟ್ ಇಂಡೀಸ್ 104 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ವೆಸ್ಟ್ ಇಂಡೀಸ್ ಅವರ ಸಾಧನೆ ಕೇವಲ ಇಷ್ಟಕ್ಕೆ ನಿಲ್ಲದೆ ಈ ಪಂದ್ಯದಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ಮೊದಲೇ ಇಂಗ್ಲಿಷ್ ನಲ್ಲಿ ಬ್ಯಾಟಿಂಗ್ ಆಡಿದ ವೆಸ್ಟ್ ಇಂಡೀಸ್ ನ ಆರಂಭಿಕ ಆಟಗಾರರಾದ ಚಾನ್ಸನ್ ಚರ್ಲ್ಸ್ ಅವರು 27 ಎಸೆತಗಳಲ್ಲಿ 43 ರನ್ ಬಾರಿಸುವ ಮೂಲಕ ಉತ್ತಮ ಆರಂಭವನ್ನು ನೀಡಿದರೆ, ಮೊದಲ ವಿಕೆಟ್ ಪತನಕ್ಕೆ ಕ್ರೀಸ್ ಗೆ ಬಂದಂತಹ ನಿಕೋಲಸ್ ಪೂರನ್ ಅವರು 53 ಎಸೆತಕ್ಕೆ 8 ಸಿಕ್ಸ್ ಹಾಗೂ ಒಂಬತ್ತು ಬೌಂಡರಿ ಗಳನ್ನು ಬಾರಿಸುವ ಮೂಲಕ 98 ರನ್ ಕಲೆಹಾಕಿದರು. ಇದರಿಂದ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್ ಗಳ ನಷ್ಟಕ್ಕೆ 218 ರನ್ ನ ಗುರಿ ನೀಡಿದರು. ಇದು t20 WC ನಲ್ಲೇ ಗರಿಷ್ಠ ಸ್ಕೋರ್ ಗಳಿಸಿದ ತಂಡವಾಗಿ ಹೊರಹೊಮ್ಮಿದೆ.
ಅಲ್ಲದೇ ಪವರ್ ಪ್ಲೇನಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್ ಗಳು 92 ರನ್ ಬಾರಿಸುವ ಮೂಲಕ ಟಿ-20 ವಿಶ್ವಕಪ್ ಇತಿಹಾಸದಲ್ಲಿಯೇ ಇದು ಗರಿಷ್ಠ ಪವರ್ ಪ್ಲೇ ಕೋರ್ ಆಗಿದೆ. ಹಾಗೆಯೇ ಟಿ-20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ನ ಗರಿಷ್ಠ ಸ್ಕೋರಾಗಿದೆ. ಈ ಹಿಂದೆ 2007ರಲ್ಲಿ ಸೌತ್ ಆಫ್ರಿಕಾ ಗಳಿಸಿದಂತಹ 205 ರನ್ ಗಳು ವೆಸ್ಟ್ ಇಂಡೀಸ್ ತಂಡದ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಇದೀಗ ಆ ದಾಖಲೆಯನ್ನು ಮುರಿಯುವುದರ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ.
ಅಫ್ಘಾನಿಸ್ತಾನದ ವಿರುದ್ಧ 104 ರನ್ ಗಳ ಭರ್ಜರಿ ಜಯಸಾಧಿಸಿ ಎರಡನೇ ಬಾರಿ ನೂರಕ್ಕಿಂತ ಅಧಿಕ ರನ್ ಗಳ ಅಂತರದಿಂದ ಜಯ ಸಾಧಿಸಿದೆ. ಇದು ಒಂದು ದಾಖಲೆಯೇ ಆಗಿದೆ.
3 thoughts on “T20 WC: WI vs AFG ಪಂದ್ಯ ಒಂದು ದಾಖಲೆ ಹಲವು”