T20 World Cup 2024: ಟಿ20 ವಿಶ್ವಕಪ್ ನ ಸೂಪರ್ 8 ಪಂದ್ಯಾವಳಿಯಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಭಾರತವು ತನ್ನ ರೋಚಕ ಪ್ರದರ್ಶನದ ಮೂಲಕ ಗೆಲುವು ಸಾಧಿಸಿಕೊಂಡಿದೆ. ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ 24 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿ ಸೆಮಿ ಫೈನಲ್ ಗೆ ತಲುಪಿದೆ.
ಸೈಂಟ್ ಲೂಸಿಯಾದ ಡೇರೆನ್ ಸಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತದ ಮತ್ತು ಆಸ್ಟ್ರೇಲಿಯಾ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪಡೆ 205 ರನ್ ಗಳ ಭರ್ಜರಿ ಟಾರ್ಗೆಟ್ ಅನ್ನು ನೀಡಿತ್ತು.
206 ರನ್‌ಗಳ ಗುರಿಯನ್ನು ಬೆನ್ನಟ್ಟಲು ಹೊರಟ ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟೇಲಿಯಾವು ನಿಗದಿತ 20 ಓವರ್ ಗಳಲ್ಲಿ 7 ವಿಕೇಟ್ ಕಳೆದುಕೊಂಡು 181 ರನ್ ಗಳಗೆ ಸೀಮಿತವಾಗಿತ್ತು. ಇನ್ನು ಸೋತ ಆಸ್ಟ್ರೇಲಿಯಾ ತಂಡದ ಸೆಮಿಫೈನಲ್ ಹಾದಿ ಕಠಿಣವಾಗಿದೆ.
ಭಾರತವು ನೀಡಿದ್ದ ನೂರಾರು ರನ್ ಹತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಅಟಗಾರ ಡೇವಿಡ್ ವಾರ್ನರ್ ಕೇವಲ (6) ರನ್ ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಶ್ 81 ರನ್ ಗಳ ಅದ್ಭುತ ಜೊತೆಯಾಟವಾಡಿದರು.
ಇವರ ಜೊತೆ ಆಟವೂ ಭಾರತ ತಂಡದ ಗೆಲುವಿಗೆ ಮುಳುವಾಯಿತು ಎಂದು ಭಾರತದ ಟಿಕೆಟ್ ಅಭಿಮಾನಿಗಳು ಅಂದಾಜು ಮಾಡುವ ಅಷ್ಟರಲ್ಲಿಅಕ್ಸರ್ ಪಟೇಲ್ ಹಿಡಿದ ಕ್ಯಾಚ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಭಾರತಕ್ಕೆ ತೀವ್ರ ಕಾಟ ಕೊಡುತ್ತಿದ್ದ ಮಿಚೆಲ್ ಮಾರ್ಶ್ ಅಕ್ಸರ್ ಪಟೇಲ್ ಹಿಡಿದ ಕ್ಯಾಚಿಗೆ ತಮ್ಮ ವಿಕೆಟ್ ಒಪ್ಪಿಸಿದರು.
ನಡುಕ ಹುಟ್ಟಿಸಿದ ನಾಯಕ ರೋಹಿತ್ ಆಟ
ಆರಂಭಿಕ ಆಟಗಾರ ವಿರಾಟ್ ಕೊಹ್ಲಿ ಔಟಾದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಪಂದ್ಯದ ದಿಕ್ಕನ್ನೇ ಬದಲಿಸಿದರು. ಬಹಳ ದಿನಗಳ ನಂತರ ಫಾರ್ಮ್ ಗೆ ಬಂದ ರೋಹಿತ್ ಶರ್ಮಪವರ್‌ಪ್ಲೇನಲ್ಲಿಯೇ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ರೋಹಿತ್, ಒಟ್ಟಾರೆ 41 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 92 ರನ್‌ಗಳನ್ನು ಸಿಡಿಸಿದರು. ಈ ಮೂಲಕ ತಂಡಕ್ಕೆ 200 ರನ್ ಗಳ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದಲು ಕ್ರೆಜ್ ಗಿಳಿದ ವಿರಾಟ್ ಕೊಹ್ಲಿ 5 ಬಾಲ್ ಎದುರಿಸಿ ಯಾವುದೇ ರನ್ ಗಳಿಸದೆ ಔಟಾದರು. ತಮ್ಮ ಭರ್ಜರಿ ಪ್ರದರ್ಶನ ನೀಡಿದ ರೋಹಿತ್ ಶರ್ಮಾ 92 ರನ್‌ಗಳಿಸಿದರೆ, ಸೂರ್ಯಕುಮಾರ್ ಯಾದವ್ 31 ರನ್, ಶಿವಂ ದುಬೆ 28 ರನ್ ಹಾಗೂ ಹಾರ್ದಿಕ್ ಪಾಂಡ್ಯ 27 ರನ್ ಗಳಿಸಿದರು.
ಉತ್ತಮ ಬೋಲಿಂಗ್ ಪ್ರದರ್ಶನ
ಇಂಡಿಯಾ ಪರ ಬೋಲಿಂಗ್ ಮಾಡಿದ ಹರ್ಷದೀಪ್ ಸಿಂಗ್ 3 ವಿಕೆಟ್ ಪಡೆದುಕೊಂಡು ತಂಡದ ಗೆಲುವಿಗೆ ಸಹಕರಿಸಿದರು. ಕುಲದೀಪ್ ಯಾದವ್ 2, ಜಸ್ಪ್ರೀತ್ ಬೂಮ್ರಾ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದುಕೊಂಡರು.
ಆಸ್ಟ್ರೇಲಿಯಾ ಪರ ಬೋಲಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಲಾ 2 ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್ 1 ವಿಕೆಟ್ ಪಡೆದರು.