ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ ರಾಜ್ಯದ 578 ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ಪೂರ್ವ ಪ್ರಾಥಮಿಕ ತರಗತಿಗಳನ್ನು(LKG UKG in Government School) ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಆದೇಶಿಸಿದೆ.
2023-2024ನೇ ಸಾಲಿನ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ ಆಯ್ಕೆಯಾದ ರಾಜ್ಯದ 262 ಸರ್ಕಾರಿ ಶಾಲೆಗಳು ಮತ್ತು ಪ್ರಸಕ್ತ 2024 25 ನೇ ಸಾಲಿನ ಆಯ್ಕೆಯಾಗಿರುವ 316 ಸರ್ಕಾರಿ ಶಾಲೆಗಳಲ್ಲಿ ಒಟ್ಟು ರಾಜ್ಯದ 578 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವುದಕ್ಕೆ ಸೂಚನೆ ನೀಡಲಾಗಿದೆ.
ಕೇಂದ್ರ ಸರ್ಕಾರದ ಶಿಕ್ಷಣ ಮಂಡಲಿಯ ಸೂಚನೆಯಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಯೋಗಿಕವಾಗಿ ಪ್ರಾರಂಭಿಸಲು ವಿವಿರವಾದ ಸೂಚನೆಗಳನ್ನು ಸಹ ಬಿಡುಗಡೆ ಮಾಡಲಾಗಿದೆ.ತರಗತಿಗಳನ್ನು ಪ್ರಾರಂಭಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಶಾಲೆ ಪ್ರಾರಂಭವಾದ ಕುರಿತು ಸ್ಥಳೀಯ ಮಟ್ಟದಲ್ಲಿ ಶಿಕ್ಷಕರ ಸಹಾಯದಿಂದ ಪ್ರಚಾರ ಮಾಡಬೇಕು.
ಅಧಿಸೂಚನೆಯ ಪ್ರಾಕರ ಸಧ್ಯಕ್ಕೆ ಎಲ್.ಕೆ.ಜಿ ತರಗತಿಗಳನ್ನು ಮಾತ್ರ ಪ್ರಾರಂಭಿಸಬೇಕು ಇಲ್ಲಿಗೆ 4 ರಿಂದ 5 ನೇ ವಯಸ್ಸಿನ ಮಕ್ಕಳನ್ನು ದಾಖಲು ಮಾಡಿಕೊಳ್ಳಬೇಕು. ಕನಿಷ್ಠ 20 ರಿಂದ ಗರಿಷ್ಠ 30 ಮಕ್ಕಳನ್ನು ಮಾತ್ರ ದಾಖಲುಮಾಡಿಕೊಳ್ಳಬೇಕು ಎಂದು ಸೂಚನೆಗಳನ್ನು ಬಿಡುಗಡೆ ಮಾಡಲಾಗಿದೆ.
ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕಿ/ಶ್ಷಿಕಕರನ್ನು ಮತ್ತು ಒಬ್ಬರು ಅಯಾರವರನ್ನು ಶಾಲೆಯ ವತಿಯಿಂದ 10 ತಿಂಗಳುಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಬೇಕು.ಶಿಕ್ಷಕರಿಗೆ ಮಾಸಿಕ 10 ಸಾವಿರ ರೂ ಮತ್ತು ಅಯಾಗಳಗೆ ಮಾಸಿಕ 5 ಸಾವಿರ ರೂ ವೇತನವನ್ನು ನೀಡಬೇಕು ಎಂದು ಅದೇಶದಲ್ಲಿ ಸೂಚಿಸಲಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕ ಕಛೇರಿಯಿಂದ ಅಯಾ ಎಸ್.ಡಿ.ಎಂ.ಸಿ ಖಾತಗೆ ವೇತನದ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.