David Warner: ಅಂತರಾಷ್ಟ್ರೀಯ ಕ್ರಿಕೆಟ್ ಗೆ ಡೇವಿಡ್ ವಾರ್ನರ್ ನಿವೃತ್ತಿ ಘೋಷಣೆ

By Aishwarya

Published On:

Follow Us

David Warner: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಸೋತು ಆಸ್ಟ್ರೇಲಿಯ ತಂಡವು ಹೊರಬಂದ ಬೆನ್ನಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬಹು ಮುಖ್ಯ ಆರಂಭಿಕ ಆಟಗಾರನಾಗಿ ಡೇವಿರ್ನರ್ ಗುರುತಿಸಿಕೊಂಡಿದ್ದರು. 37 ವರ್ಷದ ಡೇವಿಡ್ ವಾರ್ನರ್ ಜನವರಿ 1 , 2024ರಂದು ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದರು. ಜನವರಿ 6 ರಂದು ಕೊನೆಯ ಟೆಸ್ಟು ಪಂದ್ಯ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ಗೂ ವಿದಾಯ ಹೇಳಿದರು.

ಟಿ20 ವಿಶ್ವಕಪ್ ಶುರುವಾಗುವ ಮುನ್ನವೇ ಡೇವಿಡ್ ವಾರ್ನರ್ ನಿವೃತ್ತಿಯ ಸೂಚನೆಯನ್ನು ನೀಡಿದ್ದರು. ತಮ್ಮ ಟಿಕೆಟ್ ಕೆರಿಯರ್ ಅಂತ್ಯದ ಸಮಯದಲ್ಲಿ ಉತ್ತಮ ಪ್ರದರ್ಶನ ಕನಸನ್ನು ಕಂಡಿದ್ದರು, ಆದರೆ ನೆನ್ನೆ ನಡೆದ ಆಸ್ಟ್ರೇಲಿಯಾ ಮತ್ತು ಭಾರತ ಪಂದ್ಯದಲ್ಲಿ 6 ಬಾಲಿಗೆ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಪಂದ್ಯವನ್ನು ಆಸ್ಟ್ರೇಲಿಯಾ ತಂಡವು ಸೋಲುವ ಮೂಲಕ ಟಿ20 ವಿಶ್ವಕಪ್ ನ ಟೂರ್ನಿ ನಿಂದ ಹೊರ ಬಿದ್ದಿತ್ತು, ಹೀಗಾಗಿ ಡೇವಿಡ್ ವಾರ್ನರ್ ನೋವಿನ ವಿದಾಯ ಹೇಳುವಂತಾಗಿದೆ.

ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರವಾಗಿ ಏಕದಿನ ಕ್ರಿಕೆಟಿನಲ್ಲಿ 161 ಪಂದ್ಯ 159 ಇನಿಂಗ್ಸ್ ಆಡುವ ಮೂಲಕ 6932 ರನ್ ಕಲೆಹಾಕಿದ್ದಾರೆ. ಈ ವೇಳೆ 22 ಭರ್ಜರಿ ಶತಕ ಹಾಗೂ 33 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಇನ್ನೂ ಟೆಸ್ಟ್ ಕ್ರಿಕಟ್ ನಲ್ಲಿ 112 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 205 ಇನಿಂಗ್ಸ್ ಆಡಿರುವ ಅವರು 3 ದ್ವಿಶತಕ, 26 ಶತಕ ಹಾಗೂ 37 ಅರ್ಧಶತಕಗಳೊಂದಿಗೆ ಒಟ್ಟು 8786 ರನ್ ಕಲೆಹಾಕಿದ್ದಾರೆ.

ಆಸ್ಟ್ರೇಲಿಯಾ ಪರವಾಗಿ ಟಿ20 ಪಂದ್ಯಗಳಲ್ಲಿ ಉತ್ತಮ ದಾಖಲೆ ಮಾಡಿರುವ ಡೇವಿಡ್ ವಾರ್ನರ್ 110 ಪಂದ್ಯಗಳಲ್ಲಿ 2300 ಎಸೆತಗಳನ್ನು ಎದುರಿಸಿ 3277 ರನ್ ಕಲೆಹಾಕಿದ್ದಾರೆ. 

ಕ್ರಿಕೆಟ್‌ ನ ಮೂರು ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಡೇವಿಡ್ ವಾರ್ನರ್ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಆರಂಭಿಕ ಆಟಗಾರರಾಗಿ ಮೈದಾನಕ್ಕೆ ಇಳಿಯುತ್ತಿದ್ದರೆ ಬೋಲರ್ ಗಳಲ್ಲಿ ನಡುಕ ಹುಟ್ಟಿಸುತ್ತಿದ್ದರು.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow