T20 world cup 2024 Prize money: ಸತತ 17 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡವು ನಾಯಕ ರೋಹಿತ್ ಶರ್ಮ ನೇತೃತ್ವದಲ್ಲಿ ಟಿ20 ವಿಶ್ವ ಕಪ್ ಗೆದ್ದಿದೆ, 2007ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ತಂಡವು ಟಿ20 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತ್ತು.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಭಾರತ ತಂಡವು 7 ರನ್ ಗಳ ಜಯಗಳಿಸಿತು. ಈ ಮೂಲಕ ಕೋಟ್ಯಾಂತರ ಭಾರತೀಯರ ಕನಸನ್ನು ನೆನಸು ಮಾಡಿದರು. ವಿಶ್ವ ಟಿ20 ಚಾಂಪಿಯನ್ಸ್ ಎನಿಸಿಕೊಂಡ ಭಾರತ ಮತ್ತು ರನ್ನರ್ ಅಪ್ ಅದ ದಕ್ಷಿಣ ಆಫ್ರಿಕಕ್ಕೆ ದೊಡ್ಡ ಮೊತ್ತದ ಬಹುಮಾನವನ್ನು ನೀಡಲಾಗಿದೆ. ಇನ್ನು ಸಮಿ ಫೈನಲ್ಸ್ ನಲ್ಲಿ ಸೋತ ತಂಡಗಳು, ಸೂಪರ್ 8 ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಗಳಿಗೆ ಐಸಿಸಿ ಬಹುಮಾನ ಮೊತ್ತವನ್ನು ನೀಡಿ ಗೌರವಿಸಿದೆ.
93.80 ಕೋಟಿ ಬಹುಮಾನ ಪಡೆದ ಭಾರತ
ಸತತ 17 ವರ್ಷಗಳ ಬಳಿಕ ಟೀಮ್ ಇಂಡಿಯಾ ವಿಶ್ವ ಕಪ್ ತನ್ನದಾಗಿಸಿಕೊಂಡಿದೆ. ಭಾರತವು 2.45 ಮಿಲಿಯನ್ ಡಾಲರ್ ಗಳನ್ನು ಅಂದರೆ ಭಾರತದ ರೂಪಾಯಿಯಲ್ಲಿ 20.50 ಕೋಟಿ ರೂಗಳನ್ನು ಬಹುಮಾನವಾಗಿ ಪಡೆದುಕೊಂಡಿದೆ. ಇಷ್ಟೇ ಅಲ್ಲದೆ ಟೀಮ್ ಇಂಡಿಯಾ ಈ ಬಾರಿ ಯಾವುದೇ ಪಂದ್ಯಗಳನ್ನು ಸೋಲದೆ ಅಜೇಯರಾಗಿ ಕಪ್ ಗೆದ್ದಿದೆ. ಐಸಿಸಿ ಪ್ರತಿಪಂಧ್ಯಕ್ಕೆ 2.96 ಲಕ್ಷಗಳನ್ನು ನೀಡುತ್ತದೆ ಇದರಿಂದ ಸುಮಾರು 22.76 ಕೋಟಿ ರೂ ಭಾರತ ಕ್ರಿಕೆಟ್ ತಂಡಕ್ಕೆ ಲಭಿಸಿದೆ.
ಇನ್ನು ಮೊದಲ ಬಾರಿಗೆ ಫೈನಲ್ ತಲುಪಿದ ದಕ್ಷಿಣ ಆಫ್ರಿಕಾ ತಂಡಕ್ಕೆ 1.28 ಮಿಲಿಯನ್ ಡಾಲರ್ ಭಾರತೀಯ ರೂಪಾಯಿಯಲ್ಲಿ ಸುಮಾರು 10.67 ಕೋಟಿ ಸಮಾಧಾನಕರ ಬಹುಮಾನ ನೀಡಲಾಗಿದೆ. ಇನ್ನು ಒಟ್ಟಾರೆ ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 12.7 ಕೋಟಿ ರೂ ಗಳಿಸಿಕೊಂಡಿದೆ. ಸೆಮಿ ಫೈನಲ್ ನಲ್ಲಿ ಸೋತ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಕ್ಕೆ 6.56 ಕೋಟಿ ರೂ ಗಳನ್ನು ನೀಡಲಾಗಿದೆ.
ಸೂಪರ್ 8ರಲ್ಲಿ ಸೋತ ತಂಡಗಳಿಗೆ 3.19 ಕೋಟಿ ರೂಗಳು, 9 ರಿಂದ 12ನೇ ಸ್ಥಾನದಲ್ಲಿದ್ದ ತಂಡಗಳಿಗೆ 2.6 ಕೋಟಿ ರೂಗಳು, 13 ರಿಂದ 20ನೇ ಸ್ಥಾನದಲ್ಲಿದ್ದ ತಂಡಗಳಿಗೆ 1.87 ಕೋಟಿ ರೂಗಳ ಬಹುಮಾನವನ್ನು ನೀಡಲಾಗಿದೆ.