ನೂತನವಾಗಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಅಗಿ ಗೌತಮ್ ಗಂಭೀರ್ ಹೆಸರು ಬಹುತೇಕ ಫಿಕ್ಸ್ ಆಗಿದ್ದು ಅಧಿಕೃತ ಘೋಷಣೆ ಒಂದೇ ಬಾಕಿ ಉಳಿದಿದೆ. ಕಳೆದ ಮಂಗಳವಾರ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಸಂದರ್ಶನ ಮಾಡಲಾಯಿತು. ಇದರಲ್ಲಿ ಭಾರತ ತಂಡದ ಮಾಜಿ ಆಟಗಾರ ಗೌತಮ ಗಂಭೀರ್ ಸಿಎಸಿ ಅಧ್ಯಕ್ಷ ಅಶೋಕ್ ಮಲ್ಹೋತ್ರಾ ಅವರೊಂದಿಗೆ ವರ್ಚುವಲ್ ಮೂಲಕ ಸಂಘಟನೆ ಸಂದರ್ಶನದಲ್ಲಿ ಭಾಗಿಯಾಗಿದ್ದರು.
ಒಟ್ಟು ಎರಡು ಹಂತಗಳಲ್ಲಿ ಸಂದರ್ಶನವು ನಡೆಯಲಿದ್ದು ಈಗಾಗಲೇ ಒಂದು ಹಂತದ ಸಂದರ್ಶನ ನಡೆದಿದೆ ಮತ್ತೊಂದು ಹಂತದ ಸಂದರ್ಶನ ನಾಳೆ ನಡೆಯಲಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಐಪಿಎಲ್ ನ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕಳೆದ ಎರಡು ವರ್ಷಗಳಲ್ಲಿ ಪ್ಲೇ ಆಪ್ಸ್ ಗೆ ತಲುಪಿವಲ್ಲಿ ಯಶಸ್ವಿಯಾಗಿತ್ತು. ಬಳಿಕ ಈ ಬಾರಿಯ 2024ರ ಐಪಿಎಲ್ ನಲ್ಲಿ ಕೊಲ್ಕತ್ತಾ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು ಈ ತಂಡವು ಐಪಿಎಲ್ ನಲ್ಲಿ ಚಾಂಪಿಯನ್ಸ್ ಆಗಿದ್ದರು. ಬಿಸಿಸಿಐ ಮುಂದೆ ಬರುವ ಪಂದ್ಯಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಗೌತಮ್ ಗಂಭೀರ್ ಹೆಸರನ್ನು ಅಂತಿಮ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಸದ್ಯ ಭಾರತ ತಂಡದ ಕೋಚ್ ಅಗಿ ರಾಹುಲ್ ದ್ರಾವಿಡ್ ರವರು ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಭಾಗಿಯಾಗಿದ್ದಾರೆ ವಿಶ್ವಕಪ್ ಮುಗಿದ ಬಳಿಕ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ