T20 Worls Cup: ಬುಧವಾರ ನ್ಯೂಯಾರ್ಕ್ ನ ನಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 25ನೇ ಪಂದ್ಯದಲ್ಲಿ ಅತಿಥೇಯ ತಂಡ ಯುಎಸ್ಎ ಎದುರು ಭಾರತ 7 ವಿಕೆಟ್ ಗಳ ಜಯ ಸಾಧಿಸಿ ಸೂಪರ್ 8 ಕ್ಕೆ ಕಾಲಿಟ್ಟಿದೆ.
ಟಾಸ್ ಗೆದ್ದು ಬೋಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಯುಎಸ್ಎ ತಂಡವನ್ನು 110 ರನ್ ಗಳಿಗೆ ಕಟ್ಟಿಹಾಕಿತ್ತು. 111 ರನ್ ಗಳ ಗುರಿ ಹಿಂಬಾಲಿಸಿದ್ದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದರೂ ಸೂರ್ಯಕುಮಾರ್ ಯಾದವ್ ಅರ್ಧಶತಕದ ಸಹಾಯದಿಂದ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಬೀಗುವ ಮೂಲಕ ಸೂಪರ್ 8ಕ್ಕೆ ಪ್ರವೇಶ ನೀಡಿದೆ.
ನ್ಯೂಯಾರ್ಕ್: ಆರಂಭದಿಂದಲೇ ತನ್ನ ಸ್ವಂತ ನೆಲದಲ್ಲಿ ಅರ್ಷದೀಪ್ ಸಿಂಗ್ (9/4) ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಯುಎಸ್ಎ ಕಠಿಣ ಗುರಿಯನ್ನು ನೀಡುವಲ್ಲಿ ವಿಫಲವಾಯಿತು. ನಂತರದಲ್ಲಿ ಸೂರ್ಯಕುಮಾರ್ ಯಾದವ್ (50 ಅಜೇಯ) ಅವರ ಅರ್ಧಶತಕದ ಬಲದಿಂದ ಯುಎಸ್ಎ ವಿರುದ್ದ ಭಾರತ ತಂಡ 18.2 ಗಳಲ್ಲಿಯೇ 7 ವಿಕೆಟ್ ಗಳ ಗೆಲುವು ಪಡೆದಿದೆ. ಈ ಹಿನ್ನೆಲೆ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಹಂತದಲ್ಲಿ ಟೀಮ್ ಇಂಡಿಯಾ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಅತಿ ಹೆಚ್ಚು ಭಾರತೀಯ ಆಟಗಾರರನ್ನೆ ಒಳಗೊಂಡಿದ್ದ ಯುಎಸ್ಎ ತಂಡ ವಿಶ್ವ ಕಪ್ ಟೂರ್ನಿಯಲ್ಲಿ ಸೊಲಿಲ್ಲದ ಸರದಾರನಾಗಿತ್ತು. ಅದೇ ಆಟವನ್ನು ಮುಂದುವರೆಸಲು ಬಂದಿದ್ದಂತಹ ಯುಎಸ್ಎ ತಂಡವನ್ನು ಅರ್ಷದೀಪ್ ತನ್ನ ಮಾರಕ ಬೌಲಿಂಗ್ ಮೂಲಕ 4 ಓವರ್ನಲ್ಲಿ 9 ರನ್ ನೀಡಿ 4 ವಿಕೆಟ್ ಪಡೆದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.
-ಆರಂಭದಲ್ಲೇ ಮುಗ್ಗರಿಸಿದ್ದ ಭಾರತ
ಸೌರವ್ ನೇತ್ರವಳ್ಕರ್ ಅವರು ಮೊದಲ ಓವರ್ನಲ್ಲೆ ಆರಂಭಿಕರಾದ ವಿರಾಟ್ ಕೊಹಿ ಅವರ ವಿಕೆಟ್ ಪಡೆದರೆ, ಪವರ್ ಪ್ಲೇ ಮುಗಿಯುವಷ್ಟರಲ್ಲೇ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ್ದರು. ಇದರಿಂದ ಭಾರತ ತಂಡ ಕೇವಲ 10 ರನ್ ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲಿಕಿತ್ತು. ನಂತರ ಮೂರನೇ ಕ್ರಮಾಂಕದಲ್ಲಿ ಬಂದ ರಿಷಭ್ ಪಂತ್ 18 ರನ್ ಗಳಿಸಿ ತಂಡ ಉಸಿರು ಬಿಡುವಂತೆ ಮಾಡಿ, ಅಲಿ ಖಾನ್ ಅವರ ಬೌಲಿಂಗ್ ಗೆ ಕ್ಲೀನ್ ಬೌಲ್ಡ್ ಆದರು.
ಭಾರತಕ್ಕೆ 111 ರನ್ ಗಳ ಗುರಿ ನೀಡಿದ್ದ ಯುಎಸ್ಎ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಯುಎಸ್ಎ ತಂಡ ಅರ್ಷದೀಪ್ ಸಿಂಗ್ ಮಾರಕ ಬೌಲಿಂಗ್ ದಾಳಿಗೆ ನಲುಗಿ ತನ್ನ ಪಾಲಿನ 20 ಓವರ್ಗಳಿಗೆ 8 ವಿಕೆಟ್ ನಷ್ಟಕ್ಕೆ ಕೇವಲ 110 ಕಲೆಹಾಕಿ ಭಾರತ ತಂಡಕ್ಕೆ 111 ರನ್ ಗಳ ಗುರಿಯನ್ನು ನೀಡಿತ್ತು. ಯುಎಸ್ಎ ಪರ 27 ರನ್ ಗಳಿಸಿದ ನಿತೀಶ್ ಕುಮಾರ್ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.
-ಭಾರತದ ಕೈ ಹಿಡಿದ ಸೂರ್ಯ-ಶಿವಂ
ರಿಷಬ್ ವಿಕೆಟ್ ನಂತರ ತಂಡದ ಜವಾಬ್ದಾರಿ ಹೊತ್ತ ಸೂರ್ಯ ಕುಮಾರ್ ಯಾದವ್ 49 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದರೆ, ಶಿವಂ ದುಬೆ ಅವರು 35 ಎಸೆತಗಳಲ್ಲಿ ಅಜೇಯ 31 ರನ್ ಗಳಿಸುವ ಮೂಲಕ 72 ರನ್ ಗಳ ಜೊತೆಯಾಟವನ್ನು ಆಡಿ ಭಾತವನ್ನು ಗೆಲುವಿನ ದಡ ಸೇರಿಸಿದರು.
-ಡಬಲ್ ಖುಷಿಯಲ್ಲಿ ಅರ್ಷದೀಪ್ ಸಿಂಗ್
ತನ್ನ ಮಾರಕ ಬೌಲಿಂಗ್ ದಾಳಿ ಮೂಲಕ ಅರ್ಷದೀಪ್ ಸಿಂಗ್ 4 ಓವರ್ಗಳಲ್ಲಿ ಕೇವಲ 9 ರನ್ ನೀಡಿ 4 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯತ್ತಮ ಬೌಲಿಂಗ್ ಸ್ಪೆಲ್ ಮಾಡಿದ ಬೌಲರ್ ಎನಿಸಿಕೊಂಡಿದ್ದಾರೆ. ಇದರಿಂದ 2014ರಲ್ಲಿ 11 ರನ್ ಗೆ 4 ವಿಕೆಟ್ ಪಡೆದಿದ್ದ ಆರ್ ಅಶ್ವಿನ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಸ್ಕೋರ್ನ ವಿವರ(ಯುಎಸ್ಎ) : ಸ್ಟೀವನ್ ಟೇಲರ್ 24/30, ಶಯನ್ ಜಹಂಗಿರ್ 0/1, ಆಂಡ್ರಿಸ್ ಗೌಸ್ 2/5, ಆರೋನ್ ಜೋನ್ಸ್(ನಾಯಕ) 11/22, ನಿತೀಶ್ ಕುಮಾರ್ 27/23, ಕೋರೆ ಆಂಡರ್ಸನ್ 15/12, ಹರ್ಮೀತ್ ಸಿಂಗ್ 10/10, ಶಾಡ್ಲೀ ವಾನ್ 11/10, ಜಸ್ದೀಪ್ ಸಿಂಗ್ 2/7, ಸೌರಭ್ ನೇತ್ರವಳ್ಕರ್, ಅಲಿ ಖಾನ್
ಸ್ಕೋರ್ನ ವಿವರ(ಭಾರತ): ರೋಹಿತ್ ಶರ್ಮಾ (ನಾಯಕ) 3/6, ವಿರಾಟ್ ಕೊಹ್ಲಿ 0/1, ರಿಷಭ್ ಪಂತ್ 18/20, ಸೂರ್ಯಕುಮಾರ್ ಯಾದವ್ 50/49, ಶಿವಂ ದುಬೆ 31/35.