India vs Afghanistan T20 World cup 2024: ನಿನ್ನೆ ನಡೆದ ಟಿ20 ವಿಶ್ವಕಪ್ ನ ಸೂಪರ್ 8 ತಂಡಗಳ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಟೀಮ್ ಇಂಡಿಯಾ 47 ರನ್ ಗಳ ಭರ್ಜರಿ ಗೆಲುವನ್ನು ದಾಖಲಿಸಿದೆ.
ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರೋಹಿತ್ ಪಡೆ, 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಆರಂಭಿಕ ಆಟಗಾರರ ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಔಟಾದ ಬಳಿಕ ಸೂರ್ಯ ಕುಮಾರ್ ಯಾದವ್ ತಮ್ಮ ಅರ್ಧ ಶತಕದ ಮೂಲಕ ತಂಡಕ್ಕೆ ರನ್ ನ ತಂಡಕ್ಕೆ ಆಧಾರವಾದರು.
181 ರನ್ ಗಳ ಗುರಿಯನ್ನು ಬೆನ್ನಿಟ್ಟಿದ ರಶೀದ್ ಖಾನ್ ಪಡೆಯು 20 ಓವರ್ ಗಳಲ್ಲಿ 134ಕ್ಕೆ ಆಲ್ ಔಟ್ ಆಯಿತು. ಇದರ ಮೂಲಕ ಟೀಮ್ ಇಂಡಿಯಾ 47 ರನ್ ಗಳ ಜಯವನ್ನು ಸಾಧಿಸಿತು.
ಟೀಮ್ ಇಂಡಿಯಾ ಪರ ಬೋಲಿಂಗ್ ಮಾಡಿದ ಜಸ್ಟೀತ್ ಬುಮ್ರೂ ತಮ್ಮ 4 ಓವರ್ ಗಳಲ್ಲಿ ಕೇವಲ 7 ರನ್ ಕೊಟ್ಟು ಮೂರು 3 ತೆಗೆಯುವ ಮೂಲಕ ಕ್ರೀಡಾಂಗಣದಲ್ಲಿ ಮಿಂಚಿದರು.ಎಡಗೈ ಬೌಲರ್ ಅರ್ಷ್‌ದೀಪ್ ಸಿಂಗ್ 36 ರನ್ ಕೊಟ್ಟು 3 ವಿಕೆಟ್ ಕಿತ್ತರೆ, ಕುಲ್‌ದೀಪ್ ಯಾದವ್ 2 ವಿಕೆಟ್ ಪಡೆಯುವಲ್ಲಿ ಪಡೆದುಕೊಂಡರು. ಉಳಿದಂತೆ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ಆರಂಭದಲ್ಲೇ ಮೂರನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಔಟಾದರು. 13 ಎಸೆತಗಳಲ್ಲಿ ಕೇವಲ (8) ರನ್ ಗಳಿಸಿ ಫಜಲ್‍ಹಕ್ ಫಾರೂಕಿಗೆ ವಿಕೆಟ್ ಒಪ್ಪಿಸಿದರು. ನತಂರ ಕ್ರೀಸ್‍ಗಿಳಿದ ರಿಷಭ್ ಪಂತ್ ಕೇವಲ 11 ಎಸೆತಗಳಲ್ಲಿ (20) ರನ್ ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ (24) ರನ್, ಶಿವಂ ದುಬೆ ಕೇವಲ 10 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು.
ನಂತರ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯ ಕುಮಾರ್ ಯಾದವ್ ತಮ್ಮ ಅಮೂಲ್ಯ ಜೊತೆ ಆಟದ ಮೂಲಕ 37 ಎಸೆತಗಳಲ್ಲಿ (60)ರನ್ ಗಳನ್ನು ಗಳಿಸುವ ಮೂಲಕ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು.
ಕೇವಲ 28 ಎಸೆತಗಳನ್ನು ಎದುರಿಸಿದ ಸೂರ್ಯ ಕುಮಾರ್ ಯಾದವ್ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ (53) ರನ್ ಗಳಿಸಿಕೊಂಡರು. ಹಾರ್ದಿಕ್ ಪಾಂಡ್ಯ 24 ಬಾಲ್ ಗಳಿಗೆ (32) ರನ್ ಗಳನ್ನು ಗಳಿಸಿವ ಮೂಲಕ ಸೂರ್ಯ ಕುಮಾರ್ ಯಾದವ್ ಗೆ ಸಾಥ್ ನೀಡಿದರು.
ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಹಾಗೂ ಫಜಲ್‍ಹಕ್ ಫಾರೂಕಿ ತಲಾ 3 ವಿಕೆಟ್ ಪಡೆದುಕೊಂಡರು ಮತ್ತು ನವೀನ್ ಉಲ್ ಹಕ್ 1 ವಿಕೆಟ್ ಗಳಿಸಿದರು.