ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬವಾಗಿ ಬಂದಿರುವ t20 ವಿಶ್ವ ಕಪ್ ನ ಮೊದಲ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಒಟ್ಟಾರೆಯಾಗಿ ಭಾಗವಹಿಸಿದ್ದ 20 ತಂಡಗಳ ಪೈಕಿ 4 ಗುಂಪಿನಿಂದ ಟಾಪ್ 2 ತಂಡಗಳಂತೆ 8 ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ.
ಅಮೇರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುತ್ತಿರುವ 2024ನೇ ಸಾಲಿನ T20 ವಿಶ್ವ ಕಪ್ ನ ಸೂಪರ್ 8 ಕ್ಕೆ ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಯುಎಸ್ಎ ತಂಡಗಳು ಎಂಟ್ರಿ ಕೊಟ್ಟಿವೆ. ಈ 8 ತಂಡಗಳ ಹಣಹಣಿಯು ನಾಳೆಯಿಂದ ಪ್ರಾರಂಭವಾಗಲಿದ್ದು, ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಜೂನ್ 19ರಿಂದ ಅಂದರೆ ನಾಳೆಯಿಂದ ಸೂಪರ್ 8 ಹಂತ ಆರಂಭವಾಗಲಿದ್ದು, ಒಟ್ಟು 12 ಪಂದ್ಯಗಳು ನಡೆಯಲಿವೆ. ಜೂನ್ 19ರಂದು ಯುಎಸ್ಎ vs ದಕ್ಷಿಣ ಆಫ್ರಿಕಾ ತಂಡಗಳು ಎದುರಾಗಲಿವೆ. ಎಲ್ಲಾ ತಂಡಗೂ ತಲಾ ಮೂರು ಪಂದ್ಯಗಳನ್ನಾಡಲಿದ್ದು, ಹೆಚ್ಚು ಅಂಕ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಇನ್ನು ಭಾರತ ತಂಡದ ಶೆಡ್ಯೂಲ್ ನೋಡುವುದಾದರೆ ಜೂನ್ 20 ರಂದು ಅಫ್ಘಾನಿಸ್ತಾನದ ವಿರುದ್ಧ, ಜೂನ್ 22ರಂದು ಬಾಂಗ್ಲಾದೇಶದ ವಿರುದ್ಧ, ಜೂನ್ 24ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.